ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು: SWAMY VIVEKANANDA : KAPPU-BILUPU

Front Cover

 ಭಾರತದಲ್ಲಿ ಸ್ವಾಮಿ ವಿವೇಕಾನಂದರು ಅತ್ಯುನ್ನತ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಅವರನ್ನು ಧೀಮಂತ ಸಂನ್ಯಾಸಿ , ವೇದಾಂತ ಕೇಸರಿ , ಬ್ರಹ್ಮ ತೇಜಸ್ಸಿನ ಕ್ಷಾತ್ರ ವೀರನೆಂದು ಪರಿಗಣಿಸಲಾಗುತ್ತದೆ. ಭಾರತದ ಸ್ವಾತಂತ್ರ ಸಂಗ್ರಾಮ ಮತ್ತು ಆಧುನಿಕ ಭಾರತದ ಉದಯದ ಹಿಂದೆ ಸ್ವಾಮಿಗಳ ಪ್ರೇರಣೆಯಿದೆಯೆನ್ನುವ ವ್ಯಾಪಕ ನಂಬಿಕೆಯಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಅವರು ಹಿಂದೂಧರ್ಮದ ಅಧಿಕೃತ ಮೂಲವೆನ್ನುವ ಭಾವನೆ ವಿದ್ಯಾವಂತರಲ್ಲಿ ತುಂಬಿದೆ. ಸ್ವಾಮಿಗಳು ದೇಶಪ್ರೇಮ ತುಂಬಿ ತುಳುಕುತ್ತಿದ್ದ ಧೀರ ಸಂನ್ಯಾಸಿ ಮಾತ್ರವಲ್ಲ ಅವರು ಶಿವ, ಬುದ್ಧ , ಯೇಸುವಿನ ಅವತಾರ ಎನ್ನುವ ಭಾವಾವೇಶಗಳು ಕೆಲವರಲ್ಲಿವೆ. ಕಾವಿ ಬಟ್ಟೆಯುಟ್ಟು , ಎದೆಯ ಮೇಲೆ ಕೈಕಟ್ಟಿಕೊಂಡು ನಿಂತಿರುವ ಧೀರ ಉದಾತ್ತ ನಿಲುವಿನ ಅವರು  ದೇಶದ ಆತ್ಮವಿಶ್ವಾಸದ ಸಂಕೇತವಾಗಿದ್ದಾರೆ. ಆ ನಿಲುವಿಗೆ  ಲಕ್ಷಾಂತರ ಯುವಕರು ಮನಸೋತಿದ್ದಾರೆ, ತರುಣರು ಮೈಮರೆತಿದ್ದಾರೆ. ಸ್ವಾಮಿಗಳು ಹಿಂದೂಧರ್ಮದ ಪ್ರತಿನಿಧಿ ಮಾತ್ರವಲ್ಲ , ಶಿಕ್ಷಣ ತಜ್ಞ, ಆಧುನಿಕ ಚಿಂತಕ , ದೀನದಲಿತರ ಆಶಾಕಿರಣ , ಸಮಾಜ ಸುಧಾರಣೆಯ ಮುಂದಾಳು . ಹೆಂಗಸರ ಬಿಡುಗಡೆ ಮತ್ತು ಏಳ್ಗೆಯ ಹರಿಕಾರ , ಸಮಕಾಲೀನ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕ , ವಿಶ್ವ ಸೋದರತ್ವ ಪ್ರತಿಪಾದಕ ಎನ್ನುವ ಹೆಗ್ಗಳಿಕೆಗಳಿವೆ. ಸ್ವಾಮಿಗಳ ಇಂತಹ ಬಹುಮುಖಗಳ , ಬಹುಪ್ರತಿಭೆಗಳ ಚಿತ್ರಣವನ್ನು ಅವರ ಗುರುಭಾಯಿಗಳು , ಅವರೇ ಸ್ಥಾಪಿಸಿದ ರಾಮಕೃಷ್ಣ ಮಠ ಮತ್ತು ಮಿಷನ್ ಪರಂಪರೆ , ಅಭಿಮಾನಿಗಳು , ಅನುಯಾಯಿಗಳು ಕಳೆದ ನೂರುಹತ್ತು ವರ್ಷಗಳಿಂದ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆಯ ಮೇಲೆ ನಿಂತ ಜನ ಸಾಮಾನ್ಯನಿಂದ ಹಿಡಿದು ಅತ್ಯುನ್ನತ ಸ್ಥಾನ ಅಲಂಕರಿಸಿರುವ ದೇಶದ ರಾಜಕೀಯ ಮುಂದಾಳು , ಸಹಸ್ರಾರು ಕೋಟಿಗಳ ವ್ಯವಹಾರದ ಉದ್ದಿಮೆದಾರನಿಗೂ ಸ್ವಾಮಿಗಳು ಮಾದರಿಯಾಗಿದ್ದಾರೆ. ದೇಶವೇ ಆರಾಧಿಸುತ್ತಿರುವ ಇಂತಹ ಸ್ವಾಮಿಗಳ ಜೀವನವನ್ನು ವಿಮರ್ಶಿಸುವ ಅಗತ್ಯವೇ ಇಲ್ಲವೆಂದು ಭಾಸವಾಗಬಹುದಾದರೂ ತೂರಿದಾಗ ಉಳಿಯುವ ಕಾಳೆಷ್ಟು , ಜೊಳ್ಳೆಷ್ಟು ಎಂದು ಯಾರಾದರೂ, ಎಂದಾದರೂ ನೋಡುವ ಆವಶ್ಯಕತೆಯಿದೆ, ಆರಾಧನೆ ಮತ್ತು ಹೊಗಳಿಕೆಗಳ ದೈವಪ್ರಭೆಯೊಳಗೆ (ಬಿಳುಪು-ಖ್ಯಾತ, ಪರಿಚಿತ) ಸಹಜ ಮಾನವ ವಿವೇಕಾನಂದನನ್ನು (ಕಪ್ಪು-ಅಪರಿಚಿತ, ಅಜ್ಞಾತ) ಹುಡುಕುವುದೇ ಒಂದು ಸವಾಲಿನ ಕೆಲಸ. ಲಭ್ಯವಿರುವ ಸ್ವಾಮಿಗಳ ಎಲ್ಲ ಜೀವನ ಚರಿತ್ರೆಗಳು ಅವರು ಇದ್ದುದಕ್ಕಿಂತ , ಮಾಡಿದ್ದಕ್ಕಿಂತ ಮಹತ್ತಾಗಿ , ಬೃಹತ್ತಾಗಿ ಅವರನ್ನು ಚಿತ್ರಿಸುತ್ತವೆ. ಅನುಯಾಯಿ, ಅಭಿಮಾನಿಗಳು ಕಡೆದು ನಿಲ್ಲಿಸಿರುವ ಧಾರ್ಮಿಕ , ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ನಿಜವಾದ ವಿವೇಕಾನಂದರನ್ನು ಬೇರ್ಪಡಿಸಿ ನೋಡುವ , ಸ್ವಾಮಿಗಳು ಏನು ಹೇಳಿದರು ಎನ್ನುವುದಕ್ಕಿಂತ ಹೇಗೆ ಬಾಳಿದರು ಎಂದು  ಹುಡುಕುವ ಪ್ರಯತ್ನ ಈ ಪುಸ್ತಕದಲ್ಲಿದೆ.

 

What people are saying - Write a review

User Review - Flag as inappropriate

Good book.

Common terms and phrases

ಅಂತಹ ಅಜಿತ್ ಅಥವಾ ಅದಕ್ಕೆ ಅದನ್ನು ಅದರ ಅದರಲ್ಲಿ ಅದು ಅಮೆರಿಕದ ಅಮೆರಿಕದಲ್ಲಿ ಅಲ್ಲಿ ಅವರ ಅವರನ್ನು ಅವರಿಗೆ ಅವರು ಅಳಸಿಂಗ ಆಗ ಆತ ಆತನ ಆದರೆ ಆದ್ದರಿಂದ ಆಫ್ ಇಂಗ್ಲಿಷ್ ಇಂಗ್ಲೆಂಡ್ ಇಂತಹ ಇತರ ಇದು ಇದೇ ಇನ್ನೊಂದು ಇಲ್ಲ ಇಲ್ಲಿ ಈಗ ಎಂದು ಎನ್ನುವ ಎನ್ನುವುದನ್ನು ಎನ್ನುವುದು ಎರಡು ಎಲ್ಲ ಒಂದು ಒಬ್ಬ ಕಲ್ಕತ್ತ ಕಾಲ ಕುರಿತಾಗಿ ಕೆಲ ಕೆಲವು ಕೆಲಸ ಕ್ರೈಸ್ತ ಕ್ರೈಸ್ತ ಧರ್ಮ ಜಗತ್ತಿನ ಜನ ಜಾತಿ ಜೀವನ ಡಾಲರ್ ತನ್ನ ತಮ್ಮ ತಾವು ತಿಂಗಳು ದಿ ದಿನ ದಿನಗಳಲ್ಲಿ ಧರ್ಮದ ಧರ್ಮವನ್ನು ಧಾರ್ಮಿಕ ನಂತರ ನಡುವೆ ನನಗೆ ನನ್ನ ನನ್ನನ್ನು ನಮ್ಮ ನಲ್ಲಿ ನಾನು ನಾವು ನೀಡಿದ ನೀನು ನೀವು ನ್ಯೂಯಾರ್ಕ್ ಪತ್ರ ಪತ್ರಿಕೆ ಪಾಶ್ಚಾತ್ಯ ಬಂಗಾಳಿ ಬಂದ ಬಗ್ಗೆ ಬರೆದ ಪತ್ರದಲ್ಲಿ ಬಹಳ ಬೇರೆ ಬ್ರಾಹ್ಮಣ ಭಾರತ ಭಾರತಕ್ಕೆ ಭಾರತದ ಭಾರತದಲ್ಲಿ ಭಾರತೀಯ ಭಾರಿ ಭಾಷಣ ಭಾಷಣಗಳನ್ನು ಮತ್ತು ಮನೆಯಲ್ಲಿ ಮಾಡಲು ಮಾಡಿ ಮಾಡಿದ ಮಾಡಿದರು ಮಾತ್ರ ಮುಂದಿನ ಮುಂದೆ ಮೂಲಕ ಮೇರಿ ಮೇಲೆ ಮೊದಲ ಮೊದಲು ಯಾವ ಯಾವುದೇ ರಾಜ ರಾಮಕೃಷ್ಣ ವರದಿ ವರ್ಷ ವಿಶ್ವ ಧರ್ಮ ಸಂಸತ್ತಿನ ಶ್ರೀಮತಿ ಷಿಕಾಗೊ ಸಂನ್ಯಾಸಿ ಸಂಸತ್ತು ಸಂಸ್ಕೃತ ಸಮಾಜ ಸಲ ಸಾಮಾಜಿಕ ಸಾರಾ ಬುಲ್ ಸ್ವಾಮಿ ವಿವೇಕಾನಂದ ಸ್ವಾಮಿಗಳನ್ನು ಸ್ವಾಮಿಗಳಿಗೆ ಸ್ವಾಮಿಗಳು ಸ್ವಾಮಿಯವರು ಹಣ ಹಲವು ಹಾಗೂ ಹಾಗೆ ಹಿಂದೂ ಹಿಂದೂ ಧರ್ಮದ ಹೀಗೆ ಹೆಂಗಸರು ಹೆಚ್ಚು ಹೇಗೆ ಹೇಲ್ ಹೊರತು

About the author

 ವೃತ್ತಿಯಲ್ಲಿ ಸಮಲೋಚಕ ಸಿವಿಲ್ ಇಂಜಿನಿಯರ್ (Consulting Civil Engineer) ಆಗಿರುವ ಎನ್.ಶಂಕರಪ್ಪ ತೋರಣಗಲ್ಲು ಅವರು ವೈಚಾರಿಕ ಮತ್ತು ಸಂಶೋಧನಾ ಕೃತಿಗಳ ರಚನೆಯಿಂದ ಗಮನ ಸೆಳೆದಿದ್ದಾರೆ. ಪ್ರಾಚೀನ ಲಿಪಿಗಳನ್ನು ಬಿಡಿಸಿ ಓದಲು ನಡೆದ ಬೌದ್ಧಿಕ ಸಾಹಸವನ್ನು ‘ಲಿಪಿ ನಿಗೂಢ’ ಕೃತಿಯಲ್ಲಿ ಹಿಡಿದಿಟ್ಟಿದ್ದರೆ, ಆರ್ಯರು ಯಾರು ? ಅವರು ಎಲ್ಲಿಂದ ಬಂದರು ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು ‘ಆರ್ಯರಿಗಾಗಿ ಹುಡುಕಾಟ : ಹೊರಗೆ-ಒಳಗೆ’ ರಚಿಸಿದ್ದಾರೆ. ‘ಸರ್ ಎಂ.ವಿ-ಒಂದು ಬಿಚ್ಚು ನೋಟ’  ಕೃತಿಯಲ್ಲಿ  ಬಹುವಾಗಿ ವೈಭವೀಕರಣಗೊಂಡಿರುವ ಸರ್.ಎಂ. ವಿಶ್ವೇಶ್ವರಯ್ಯನವರನ್ನು ತಾಂತ್ರಿಕ ವಿಮರ್ಶೆಗೆ ಒಳಪಡಿಸಿದ್ದಾರೆ. ‘ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು’ ಕೃತಿಯಲ್ಲಿ ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ. ‘ಭಗವದ್ಗೀತೆ ಬೆಳಕು ನೀಡುವುದೇ’  ಹಾಗೂ ‘ಯೋಗ : ಭ್ರಮೆ ಮತ್ತು ವಾಸ್ತವ’ ಪುಸ್ತಕಗಳಲ್ಲಿ ವಿಭಿನ್ನ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆ. ‘ವಾಸ್ತು ಎಂಬ ವ್ಯಾಧಿ’ ಕೃತಿಯಲ್ಲಿ ಭಾರತವನ್ನು ಕಾಡುತ್ತಿರುವ ವಾಸ್ತುಶಾಸ್ತ್ರದ ಪೊಳ್ಳುತನವನ್ನು ಬಯಲಿಗೆಳೆದಿದ್ದಾರೆ. ‘ಅನಂತ-ಹಲವು ಸಾಂತ ಚಿಂತನೆಗಳು’ ಪುಸ್ತಕದಲ್ಲಿ ಗಣಿತ ಮತ್ತು ತತ್ತ್ವ ಶಾಸ್ತ್ರದಲ್ಲಿರುವ ಅನಂತದ ಕಲ್ಪನೆಯನ್ನು ಚರ್ಚಿಸಿದ್ದಾರೆ. ವಿಜ್ಞಾನಿಗಳು : ಜೀವನ-ಸಾಧನೆ, ಸಾಮಗ್ರಿಗಳು:ಹೊರಗೆ-ಒಳಗೆ ಇವರ ಇನ್ನಿತರ ಕೃತಿಗಳು.


Bibliographic information